Credited Gruhalakshmi 34th installment : ಗೃಹಲಕ್ಷ್ಮೀ ಯೋಜನೆಯ ಮೂರು ಕಂತುಗಳಲ್ಲಿ ಒಂದು ಕಂತು ಕೊನೆಗೂ ಜಮೆಯಾಯಿತು. ಇನ್ನೆರಡು ಕಂತುಗಳು ಯಾವಾಗ ಜಮೆಯಾಗುತ್ತೋ ಕಾದು ನೋಡಬೇಕು.
ಈಗಾಗಲೇ ಮೂರು ಕಂತುಗಳ ಹಣ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ತಿಳಿಸಿದ್ದರು.
Credited Gruhalakshmi 34th installment ಹೌದು, ದೀಪಾವಳಿ ಹಬ್ಬಕ್ಕೆ ಮೂರು ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಮಹಿಳೆಯರಿಗೆ ಸಹಾಯವಾಗಲಿದೆ ಎಂದು ಹೇಳಿದ್ದರು. ಆದರೆ ಕೆಲವು ಕಡೆ ದೀಪಾವಳಿ ಹಬ್ಬಕ್ಕೆ ಜಮೆಯಾಗಿದ್ದರೆ ಇನ್ನೂ ಕೆಲವು ಜಿಲ್ಲೆಗಳ ಮಹಿಳೆಯರ ಖಾತೆಗೆ ದೀಪಾವಳಿ ಹಬ್ಬದ ನಂತರ ಜಮೆಯಾಗುತ್ತಿದೆ. ಆದರೆ ಒಂದೊಂದು ಕಂತು ಜಮೆಯಾಗುತ್ತಿದೆ. ಮೂರು ಕಂತುಗಳು ಒಟ್ಟಿಗೆ ಜಮೆಯಾಗಿಲ್ಲ. ಮುಂದಿನ ಕಂತು ಅತೀ ಶೀಘ್ರದಲ್ಲಿ ಜಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
Credited Gruhalakshmi 34th installment ಗೃಹಲಕ್ಷ್ಮೀ ಯೋಜನೆಯ ಮೂರು ಕಂತಿನ ಎಷ್ಟು ಹಣ ಬಿಡುಗಡೆಯಾಗಿದೆ ?
ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36ನೇ ಕಂತು ಸೇರಿ ಒಟ್ಟು 7405.86 ಕೋಟಿ ರೂಪಾಯಿ ಮೊತ್ತವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಳೆದ ಬುಧವಾರ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದರು. ಈಗ 34ನೇ ಕಂತಿನ ಹಣ 2500 ಕೋಟಿ ರೂಪಾಯಿ, 35ನೇ ಕಂತಿನ 2452.93 ಕೋಟಿ ರೂಪಾಯಿ ಅದೇ ರೀತಿ 36ನೇ ಕಂತಿನ 2452.93 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಪ್ರತಿ ಫಲಾನುಭವಿಗೆ ಇಲ್ಲಿಯವರೆಗೆ 72 ಸಾವಿರ ರೂಪಾಯಿಯಂತೆ 1.24 ಕೋಟಿ ಮಹಿಳೆಯರಿಗೆ 86838.36 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

Credited Gruhalakshmi 34th installment ನಿಮ್ಮ ಖಾತೆಗೆ ಎಷ್ಟು ಕಂತುಗಳು ಜಮೆಯಾಗಿದೆ ? ಹೀಗೆ ಚೆಕ್ ಮಾಡಿ
ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಎಷ್ಟು ಕಂತುಗಳ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.dbtkarnataka&hl=en_IN
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಡಿಬಿಟಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಓಟಿಪಿ ಸಂಖ್ಯೆನ್ನು ನಮೂದಿಸಿದ ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಗೃಹಲಕ್ಷ್ಮೀ ಬಟನ್ ಒತ್ತಿದರೆ ಸಾಕು ನಿಮ್ಮ ಖಾತೆಗೆ ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.
Credited Gruhalakshmi 34th installment ಇಲ್ಲಿಯವರೆಗೆ ನಿಮಗೆಷ್ಟು ಕಂತುಗಳು ಬಂದಿವೆ? ಎಷ್ಟು ಹಣ ಜಮೆಯಾಗಿದೆ?
ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಒಟ್ಟು 36 ಕಂತುಗಳ ಹಣ ಜಮೆಯಾಗಿದೆ. ಹೌದು, 36 ಕಂತುಗಳು ಒಟ್ಟು ಹಣ 72 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.
Credited Gruhalakshmi 34th installment ಉಚಿತ ಸಹಾಯವಾಣಿ ನಂಬರ್ 181
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ. ಹೌದು, 181 ಎಂಬ ಸಂಖ್ಯೆಗೆ ಕರೆ ಮಾಡಿದರೆ ಸಾಕು ಎಲ್ಲಾ ಮಾಹಿತಿ ನಿಮಗೆ ಸಿಗಲಿದೆ.
ಇದನ್ನೂ ಓದಿ : Check Land Survey sketch ನಿಮ್ಮ ಜಮೀನಿನ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ 2026
ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೆ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮೀ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು.
Credited Gruhalakshmi 34th installment ಕೆಲವು ಮಹಿಳೆಯರಿಗೇಕೆ ಗೃಹಲಕ್ಷ್ಮೀ ಹಣ ಜಮೆಯಾಗುತ್ತಿಲ್ಲ
ಕೆಲವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಯಾಗುತ್ತಿದೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಜಮೆಯಾಗುತ್ತಿಲ್ಲ. ಯಾವ ಕಾರಣಕ್ಕಾಗಿ ಜಮೆಯಾಗುತ್ತಿಲ್ಲ ಎಂಬುದು ಇನ್ನೂ ಸಂಶಯವಾಗಿದೆ. ಆದರೆ ಯಾರು ಇಕೆವೈಸಿ ಮಾಡಿಲ್ಲವೋ ಅವರ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಹಾಗಾಗಿ ಯಾರು ಯಾರು ಇನ್ನೂ ಇಕೆವೈಸಿ ಮಾಡಿಸಿಲ್ಲವೋ ಅವರು ಇಕೆವೈಸಿ ಮಾಡಿಸಿಕೊಳ್ಳಬೇಕು.

Credited Gruhalakshmi 34th installment ಇಲ್ಲದಿದ್ದರೆ ಮುಂದಿನ ಕಂತುಗಳ ಹಣದಿಂದಲೂ ವಂಚಿತರಾಗುವ ಸಾಧ್ಯತೆಯಿದೆ.





