Bar parihara payment report check ಮೊದಲ ಕಂತಿನ ಬರ ಪರಿಹಾರ ಹಣ ನಿಮ್ಮ ಖಾತೆಗೆ 2500 ರೂಪಾಯಿ ಜಮೆಯಾಯಿತೇ ? ಇಲ್ಲೇ ಚೆಕ್ ಮಾಡಿ

Written by Admin

Published on:

Spread the love

Bar parihara payment report check : ರಾಜ್ಯ ಸರ್ಕಾರವು ರೈತರಿಗೆ ಮೊದಲ ಹಂತದಲ್ಲಿ ಕನಿಷ್ಠ 5 ಸಾವಿರ ರೂಪಾಯಿ ಜಮೆ ಮಾಡಲಿದೆ. ಇದರಲ್ಲಿ ಮೊದಲ ಕಂತಿನ ಹಣ 2500 ಜಮೆ ಮಾಡಲಾಗುವುದು. ಇನ್ನೊಂದು ಕಂತು ಎರಡು ವಾರಗಳ ನಂತರ 2500 ರೂಪಾಯಿ ಜಮೆಯಾಗಲಿದೆ. ಈಗ 2000 ರೂಪಾಯಿ ಜಮೆಯಾದರೆ ಮುಂದಿನ ಕಂತಿನಲ್ಲಿ 3000 ರೂಪಾಯಿ ಜಮೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ.

ಸರ್ಕಾರ ಸದಾ ರೈತರ ಪರವಾಗಿ ನಿಂತಿದೆ. ಬರಗಾಲದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲಾಗುವುದು. ಅರ್ಹ ರೈತರೆಲ್ಲರಿಗೂ ನ್ಯಾಯಯುತವಾಗಿ, ಗೌರಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಬರ ಪರಿಹಾರದ ಮೊದಲ ಕಂತಿನಲ್ಲಿ ಕೆಲವು ರೈತರಿಗೆ 2500 ಬದಲಾಗಿ 2000 ಜಮೆಯಾಗಿರುವ ಕುರಿತು ಆತಂಕ ಮತ್ತು ಗೊಂದಲ ವ್ಯಕ್ತವಾಗಿದೆ. ರೈತರ ಈ ಕಳವಳವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ವಿಷಯದ ಕುರಿತು ರಾಜ್ಯದ ಜನತೆಗೆ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕೆಲವು  ರೈತರ ಖಾತೆಗೆ ಜಮೆಯಾಗಿರುವ 2000 ಅವರಿಗೆ ಸಿಗುವ ಅಂತಿಮ ಪರಿಹಾರವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ 5000 ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಈ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

Bar parihara payment report check ಬರ ಪರಿಹಾರ ಹಣ ಎಷ್ಟು ಜಮೆ ?

2026ರ ಅಕ್ಟೋಬರ್ 23 ರಂದು ಹೊರಡಿಸಿದ ಆದೇಶದ ಮೂಲಕ ಅರ್ಹ ರೈತರಿಗೆ ತಲಾ 2500 ರೂಪಾಯಿ ಮೊದಲ ಕಂತಿನ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ನವೆಂಬರ್ 5 ರಂದು ಯಾದಿಗಿರಿ ಜಿಲ್ಲೆಯ 106462 ರೈತರಿಗೆ 17.43 ಕೋಟಿ ಬರ ಪರಿಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಇದಾದ ಬಳಿಕ, ವಿಶೇಷವಾಗಿ ಕಡಿಮೆ ಜಮೀನು ಹೊಂದಿರುವ ರೈತರು ವ್ಯಕ್ತಪಡಿಸಿದ ಆತಂಕ ಮತ್ತು ಅಹವಾಲುಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಪರಿಹಾರ ಪಾವತಿಗೆ ಅನ್ವಯವಾಗುವ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿದ್ದೇನೆ ಎಂದು ಪ್ರಕಟಣೆಯಲ್ಲಿ  ಮಾಹಿತಿ ನೀಡಿದ್ದಾರೆ.

Bar parihara payment report check ಎನ್.ಡಿಆರ್.ಎಫ್ ಎಸ್.ಡಿ.ಆರ್.ಎಫ್ ಮಾರ್ಗಸೂಚಿ

ಕೇಂದ್ರ ಸರ್ಕಾರ ರೂಪಿಸಿರುವ ಪ್ರಸ್ತುತ ಎಸ್.ಡಿ.ಆರ್.ಎಫ್ ಎನ್.ಡಿ.ಆರ್. ಎಫ್ ಮಾರ್ಗಸೂಚಿಗಳ ಪ್ರಕಾರ, ಬೆಳೆಹಾನಿಗೆ ನೀಡುವ ಪರಿಹಾರವನ್ನು ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಬೆಳೆಗಳ ವರ್ಗೀಕರಣದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಮಾರ್ಗಸೂಚಿಗಳಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ 1500 ರೂಪಾಯಿ, ನೀರಾವರಿ ಬೆಳಗಳಿಗೆ 2600 ರೂಪಾಯಿ ಬಹುವಾರ್ಷಿಕ ಬೆಳೆಗಳಿಗೆ 3200 ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಈ ಕನಿಷ್ಟ ಮಾನದಂಡಗಳಿಗೆ ಸೀಮಿತವಾಗದೆ, ರೈತರ ಹಿತದೃಷ್ಟಿಯಿಂದ ಮತ್ತೊಂದು ಹೆಜ್ಜೆ ಮುಂದೆ ಹೋಗಲು ಮುಖ್ಯಮಂತ್ರಿವರು ಮತ್ತು ನಾನು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

Bar parihara payment report check ನಿಮ್ಮ ಖಾತೆಗೆ ಜಮೆಯಾಗಿದೆಯೇ ಹೀಗೆ ಚೆಕ್ ಮಾಡಿ

ಬರ ಪರಿಹಾರ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  Bhoomi Online ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಸಕ್ತ ವರ್ಷ 2026-27 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿಪತ್ತಿನ ವಿಧದಲ್ಲಿ  Drought ಆಯ್ಕೆ ಮಾಡಿಕೊಳ್ಳಬೇಕು ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಮೊಬೈಲ್ ನಂಬರ್ ಹಾಕಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಹಣ ಜಮೆಯಾಯಿತೋ ಇಲ್ಲವೋ ಎಂಬ ಮಾಹಿತಿ ಗೊತ್ತಾಗುತ್ತದೆ.

ಇದನ್ನೂ ಓದಿ Check Land Survey sketch ನಿಮ್ಮ ಜಮೀನಿನ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ 2026

Leave a Comment