Free goat training and 20 chicks distribution ಉಚಿತವಾಗಿ ಕುರಿ ಮೇಕೆ ಸಾಕಾಣಿಕೆಗೆ ಅರ್ಜಿ ಆಹ್ವಾನ ಉಚಿತವಾಗಿ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ

Written by Admin

Published on:

Spread the love

Free goat training and 20 chicks distribution : ಉಚಿತವಾಗಿ ಕುರಿ, ಮೇಕೆ, ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆಗೆ ತರಬೇತಿ ನೀಡಲು ಹಾಗೂ ಉಚಿತವಾಗಿ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹೌದು,ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ  ಆರಸೆಟ್ ನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಾಣಿಕೆ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ) ತರಬೇತಿಯನ್ನು ನವೆಂಬರ್ 23 ರಿಂದ ಡಿಸೆಂಬರ್ 5 ರವರೆಗೆ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ 22 ಕೊನೆಯ ದಿನವಾಗಿದೆ. ಬ್ಯೂಟಿ ಪಾರ್ಲರ್ ಮಹಿಳೆಯರಿಗಾಗಿ ತರಬೇತಿಯನ್ನು ನವೆಂಬರ್ 25 ರಿಂದ ಡಿಸೆಂಬರ್ 29 ರವರೆಗೆ ಮತ್ತು ಅಣಬೆ ಕೃಷಿ ತರಬೇತಿ ನವೆಂಬರ್ 25 ರಿಂದ ಡಿಸೆಂಬರ್ 4 ರವರೆಗೆ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ 24 ಕೊನೆಯ ದಿನವಾಗಿದೆ. ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಡಿಸೆಂಬರ್ 1 ರಿಂದ 12 ರವರೆಗೆ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ 30 ಕೊನೆಯ ದಿನವಾಗಿದೆ. ಮೆಹಂದಿ ಡಿಸೈನ್ ಕೋರ್ಸ್ ತರಬೇತಿಯು ಡಿಸೆಂಬರ್ 8 ರಿಂದ 14 ರವರೆಗೆ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಡಿಸೆಂಬರ್ 7 ಕೊನೆಯ ದಿನವಾಗಿದೆ.

ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕನಿಷ್ಟ ಕನ್ನಡ ಓದಲು ಬರೆಯಲು ಬರಬೇಕು. ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ  ದಾಖಲಾತಿಗಳೊಂದಿಗೆ ಮೇಲ್ಕಂಡ  ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ತರಬೇತಿ ನಂತರ ಉದ್ಯೋಗ ಆರಂಭಿಸಲು ಬ್ಯಾಂಕುಗಳಿಂದ ಸಾಲಕ್ಕಾಗಿ ಸಹಾಯ ಮಾಡಲಾಗುತ್ತದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9900135705, 9901694389, 7019939996, 9901098123 ಹಾಗೂ 9448994585 ಗಳಿಗೆ (ಬೆಳಗ್ಗೆ 9.30 ರಿಂದ ಸಂಜೆ 5.30 ಗಂಟೆಯೊಳಗಾಗಿ) ಸಂಪರ್ಕಿಸಲು ಕೋರಲಾಗಿದೆ.

Free goat training and 20 chicks distribution  ಉಚಿತವಾಗಿ ಕೋಳಿ ಮರಿ ವಿತರಣೆಗೆ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಗದಗ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗದಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಇರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ತಾಂಡಾ ಅಭಿವೃದ್ಧಿ ನಿಗಮದ ಯೋಜನೆಯಡಿ ಸಹಕಾರ ಕುಕ್ಕುಟ ಮಹಾ ಮಂಡಳ ನಿಯಮಿತ ಇವರ ಮುಖಾಂತರ ಐದು ವಾರದ ದೇಶಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನೆಯಡಿ 5 ವಾರದ ದೇಶಇ ಕೋಳಿ ಮರಿ ವಿತರಿಸಲಾಗುವುದು.

Free goat training and 20 chicks distribution  ಪ್ರತಿ ಫಲಾನುಭವಿಗೆ 20 ಕೋಟಿ ಮರಿಗಳನ್ನು ವಿತರಿಸಲಾಗುವುದು.

ಗದಗ ತಾಲೂಕಿನ ಗ್ರಾಮೀಣ ವಿಭಾಗದ ಅರ್ಹ ರೈತ ಮಹಿಳೆಯರಿಂದ (ಬಂಜಾರ, ಲಂಬಾಣಿ, ಲಮಾಣಿ, ಸುಕಾಲಿ, ಸುಗಾಲಿ ಜನಾಂಗದವರಿಗೆ ಮಾತ್ರ) ಅರ್ಜಿ ಕರೆಯಲಾಗಿದೆ.

Free goat training and 20 chicks distribution

ಅರ್ಹ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಇದನ್ನೂ ಓದಿ Echawadi land information ನಿಮ್ಮ ಜಮೀನಿನ ಮಾಹಿತಿ ಈಗ ಈ ಚಾವಡಿ ಆ್ಯಪ್ ನಲ್ಲಿ ಸಿಗಲಿದೆ 2025

ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಗದಗ ಈ ಕಚೇರಿಗೆ ಸಂಪರ್ಕಿಸಬಹುದು

Free goat training and 20 chicks distribution  ಕುಂದಗೋಳ ತಾಲೂಕಿನ ರೈತ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಐದು ವಾರಗಳ ದೇಶಿ ಹಾಗೂ ಸುಧಾರಿತ ತಳಿಯ ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ಎಸ್.ಸಿ, ಎಸ್.ಟಿ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ 99 ಹಾಗೂ ಬಂಜಾರ, ಲಂಬಾಣಿ, ಸುಕಾಲಿ, ಸುಗಾಲಿ ವರ್ಗದ 93 ರೈತ ಮಹಿಳಾ ಫಲಾನುಭವಿಗಳಿಗೆ ತಲಾ 20 ಕೋಳಿ ಮರಿಗಲನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

Free goat training and 20 chicks distribution

ಹೆಚ್ಚಿನ ಮಾಹಿತಿಗಾಗಿ ಕುಂದಗೋಳ ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಪಶು ವೈದ್ಯಕೀಯ ಸಂಸ್ಥೆಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment