Free 20 hen chicks distribution : ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿಯಮಿತ 2026-27ನೇ ಸಾಲಿನಲ್ಲಿ ಗ್ರಾಮೀಣ ಭಾಗದ ಅರ್ಹ ರೈತ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಿದೆ.
ಇದರಲ್ಲಿ ಪರಿಶಿಷ್ಟ ಜಾತಿಗೆ 17, ಪರಿಶಿಷ್ಟ ಪಂಗಡಕ್ಕೆ 7, ಹಿಂದುಳಿದ ವರ್ಗಕ್ಕೆ 32 ಹಾಗೂ ಸಾಮಾನ್ಯ ವರ್ಗಕ್ಕೆ 43 ಫಲಾನುಭವಿಗಳಿಗೆ ಮೀಸಲಾತಿ ಇದೆ.
ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಬಂಜಾರ ಲಂಬಾಣಿ ಸಮುದಾಯದ 93 ರೈತ ಮಹಿಳೆಯರಿಗೂ ತಲಾ 20 ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಸುವವರು ಫ್ರೂಟ್ಸ್ ಐಡಿ ಹೊಂದಿರಬೇಕು. ಆಧಾರ್ ಕಾರ್ಡ್ ಅಥವಾ ಫೋಟೋ ಇರುವ ಗುರುತಿನ ಚೀಟಿ, ಬಿಪಿಎಲ್ ಪಡಿತರ ಚೀಟಿ ಹಾಗೂ ಮೀಸಲಾತಿ ಪಡೆಯುವವರು ಜಾತಿ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 21 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಗೌರಿಬಿದನೂರು ಪಶು ಆಸ್ಪತ್ರೆಯಲ್ಲಿ ಸಲ್ಲಿಸಬಹುದು.
Free 20 hen chicks distribution ಕೋಳಿ ಮರಿಗಳ ವಿತರಣೆಗೆ ಅರ್ಜಿ ಆಹ್ವಾನ
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಲ ನಿಯಮಿತ ಮೈಸೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕುಶಾಲ ನಗರ ತಾಲೂಕಿಗೆ ಮಾತ್ರ 99 (ಪರಿಶಿಷ್ಟ ಜಾತಿ ಶೇ. 17, ಪರಿಶಿಷ್ಟ ಪಂಗಡ ಶೇ. 7, ಹಿಂದುಳಿದ ವರ್ಗ ಶೇ. 32, ಸಾಮಾನ್ಯ ಶೇ. 44) ಗುರಿ ನಿಗಧಿಯಾಗಿದ್ದು ಮೀಸಲಾತಿ ಅನ್ವಯ ಆಯ್ಕೆಯಾಗುವ ಪ್ರತಿಫಲಾನುಭವಿಗಳಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನ ಉಚಿತವಾಗಿ ವಿತರಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ ಆಸ್ಪತ್ರೆ 9448422269, ಪಶುವೈದ್ಯಾಧಿಕಾರಿ ಪಶು ಆಸ್ಪತ್ರೆ ಸುಂಟಿಕೊಪ್ಪ 9880967832, ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಹೆಬ್ಬಾಲೆ 7349320828 ನ್ನು ಸಂಪರ್ಕಿಸಲು ಕೋರಿದೆ.
ಅರ್ಜಿಯನ್ನು ಭರ್ತಿ ಮಾಡಿ ನವೆಂಬರ್ 23 ರೊಳಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳು ಉಪನಿರ್ದೇಶಕರು ತಿಳಿಸಿದ್ದಾರೆ.
Free chicken chicks distribution ಉಚಿತವಾಗಿ ಕೋಳಿ ಮರಿ ವಿತರಣೆಗೆ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಗದಗ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗದಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಇರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ತಾಂಡಾ ಅಭಿವೃದ್ಧಿ ನಿಗಮದ ಯೋಜನೆಯಡಿ ಸಹಕಾರ ಕುಕ್ಕುಟ ಮಹಾ ಮಂಡಳ ನಿಯಮಿತ ಇವರ ಮುಖಾಂತರ ಐದು ವಾರದ ದೇಶಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನೆಯಡಿ 5 ವಾರದ ದೇಶಇ ಕೋಳಿ ಮರಿ ವಿತರಿಸಲಾಗುವುದು.
ಪ್ರತಿ ಫಲಾನುಭವಿಗೆ 20 ಕೋಟಿ ಮರಿಗಳನ್ನು ವಿತರಿಸಲಾಗುವುದು.
ಗದಗ ತಾಲೂಕಿನ ಗ್ರಾಮೀಣ ವಿಭಾಗದ ಅರ್ಹ ರೈತ ಮಹಿಳೆಯರಿಂದ (ಬಂಜಾರ, ಲಂಬಾಣಿ, ಲಮಾಣಿ, ಸುಕಾಲಿ, ಸುಗಾಲಿ ಜನಾಂಗದವರಿಗೆ ಮಾತ್ರ) ಅರ್ಜಿ ಕರೆಯಲಾಗಿದೆ.
ಅರ್ಹ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಗದಗ ಈ ಕಚೇರಿಗೆ ಸಂಪರ್ಕಿಸಬಹುದು
Free 20 hen chicks distribution ಕುಂದಗೋಳ ತಾಲೂಕಿನ ರೈತ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : Crop insurance jame ನಿಮಗೇಕೆ ಬೆಳೆ ವಿಮೆ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ 2024
ಐದು ವಾರಗಳ ದೇಶಿ ಹಾಗೂ ಸುಧಾರಿತ ತಳಿಯ ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ಎಸ್.ಸಿ, ಎಸ್.ಟಿ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ 99 ಹಾಗೂ ಬಂಜಾರ, ಲಂಬಾಣಿ, ಸುಕಾಲಿ, ಸುಗಾಲಿ ವರ್ಗದ 93 ರೈತ ಮಹಿಳಾ ಫಲಾನುಭವಿಗಳಿಗೆ ತಲಾ 20 ಕೋಳಿ ಮರಿಗಲನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.





