pmkisan mandhan scheme profit : ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ ರೈತರಿಗೆ 3 ಸಾವಿರ ರೂಪಾಯಿ ಪೆನ್ಶನ್ ಸಿಗಲಿದೆ.
ಹೌದು, ರೈತ ಬಾಂಧವರು ಈ ಯೋಜನೆಯಡಿ ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯು ದೇಶದ ರೈತರಿಗಾಗಿ ನಡೆಸಲಾಗುವ ಸರ್ಕಾರದ ಒಂದು ಯೋಜನೆಯಾಗಿದ್ದು, ಇದರ ಅಡಿಯಲ್ಲಿ ರೈತರಿಗೆ ಪಿಂಚಣಿ ನೀಡಲಾಗುತ್ತದೆ.
ರೈತರಿಗೆ ಲಾಭದಾಯಕ ಸಂಗತಿ ಏನೆಂದರೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುವ ಕಂತುಗಳ ಹಣವನ್ನೇ ಪಿಎಂ ಕಿಸಾನ್ ಮಾನ್ ಧನ್ ಯೋಜನೆಗೆ ಹಣ ಪಾವತಿಸಿದರೆ ಮುಂದೆ ರೈತರಿಗೆ ಪೆನ್ಶನ್ ಹಣ ಸಿಗಲಿದೆ.
pmkisan mandhan scheme profit ಏನಿದು ಪಿಎಂ ಕಿಸಾನ್ ಮಾನ್ ಧನ್ ಯೋಜನೆ ?
ದೇಶದ ಸಣ್ಣ ಮತ್ತು ಕಡಿಮೆ ವ್ಯವಸಾಯ ಹೊಂದಿರುವ ರೈತರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಆರಂಭಿಸಲಾಗಿದೆ. ಇದರ ಅಡಿಯಲ್ಲಿ 60 ವರ್ಷದ ನಂತರ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿಯಾಗಿ 3 ಸಾವಿರ ರೂಪಾಯಯಂತೆ ರೈತರಿಗೆ ವಾರ್ಷಿಕ 36 ಸಾವಿರ ರೂಪಾಯಿ ಪಡೆಯಬಹುದು. 18 ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ಪಿಂಚಣಿಗಾಗಿ ರೈತರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.
pmkisan mandhan scheme profit ರೈತರು ತಿಂಗಳಿಗೆ ಎಷ್ಟು ಹಣ ಕಟ್ಟಬೇಕು? ಹೀಗೆ ಚೆಕ್ ಮಾಡಿ
ರೈತರು ತಮ್ಮ ವಯಸ್ಸಗನುಸಾರವಾಗಿ ಹಣ ಪಾವತಿಸಬೇಕಾಗುತ್ತದೆ. ಹೌದು, ನಿಮ್ಮ ವಯಸ್ಸಿನ ಪ್ರಕಾರ ಎಷ್ಟು ಪೆನ್ಶನ್ ಹಣ ಪಾವತಿಸಬೇಕು ಎಂಬುದನ್ನು ಚೆಕ್ ಮಾಡಲು ಈ
https://maandhan.in/show_content.php?lang=1&level=1&ls_id=138&lid=115&page=6
ಲಿಂಕ್ ಮೇಲೆ ಕ್ಲಿಕ್ ಮಾಡಬೇಗಾಗುತ್ತದೆ. ನಂತರ ನಿಮಗೆ ಪಿಎಂ ಕಿಸಾನ್ ಮಾನ್ಧನ್ ಕ್ಯಾಲ್ಕುಲೇಶನ್ ಪೇಜ್ ಕಾಣಿಸುತ್ತದೆ. ಅಲ್ಲಿ ನಿಮ್ಮ ವಯಸ್ಸು ಹಾಗೂ ಅದರ ಮುಂದೆ ಪೆನ್ಶನ್ ಹಣ ಇರುತ್ತದೆ.
10 ರಿಂದ 40 ವಯೋಮಾನದವರಿಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕವಾಗಿ 3 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ.
pmkisan mandhan scheme profit ಪಿಎಂ ಕಿಸಾನ್ ಮಾನಧನ್ ಯೋಜನೆಗೆ ನೋಂದಣಿ ಯಾವ ಯಾವ ದಾಖಲೆ ಬೇಕಾಗುತ್ತದೆ ?
ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು.
ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್ ಬುಕ್, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋ ಇರಬೇಕು.
ಇದನ್ನೂ ಓದಿ Goods taxi vehicle subsidy ಗೂಡ್ಸ್ ವಾಹನ ಟ್ಯಾಕ್ಸಿ ವಾಹನ ಖರೀದಿಗೆ 4 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
ಪಿಎಂ ಕಿಸಾನ್ ಮಾನಧನ್ ಯೋಜನೆಯಂತೆ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಕಿಸಾನ್ ಯೋಜನೆ, ಪಿಎಂ ಕಿಸಾನ್ ಶ್ರಮಯೋಗಿ ಯೋಜನೆ, ಪಿಎಂ ಕಿಸಾನ್ ಮಾನಧನ್ ಯೋಜನೆ,ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
pmkisan mandhan scheme profit ರೈತರು ಪ್ರತಿ ತಿಂಗಳು ಎಷ್ಟು ಹಣ ಪಾವತಿಸಬೇಕು
ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ ಅರ್ಹ ರೈತರು ಪ್ರತಿ ತಿಂಗಳು 55 ರಿಂದ 200 ರೂಪಾಯಿಯವರೆಗೆ ಹಣ ತುಂಬಬೇಕು. ಉಳಿದ ಹಣವನ್ನು ಕೇಂದ್ರ ಸರ್ಕಾರ ಕೂಡ ಇಸ್ಟೇ ಹಣವನ್ನು ತುಂಬುತ್ತದೆ ಒಂದು ವೇಳೆ 18 ವಯಸ್ಸಿನಿಂದ ಈ ಯೋಜನೆ ಆರಂಭಿಸಿದರೆ ತಿಂಗಳಿಗೆ ಕನಿಷ್ಟ 55 ರೂಪಾಯಿಯಂತೆ ಕಟ್ಟಬೇಕು. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ 200 ರೂಪಾಯಿ ಕಟ್ಟಬೇಕು. ನಂತರ ನೀವು ಪ್ರತಿ ತಿಂಗಳು 3 ಸಾವಿರ ರೂಪಾಯಿ ಪೆನ್ಶನ್ ಪಡೆಯುವಿರಿ.





