Ration card ekyc status : ರಾಜ್ಯದ ಪಡಿತರ ಚೀಟಿದಾರರಿಗೆ ಇಕೆವೈಸಿ ಮಾಡಿಸಲು ನಿಗದಿಯಾಗಿದ್ದ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ನವೆಂಬರ್ 10 ರ ಗಡುವು ವಿಧಿಸಲಾಗಿತ್ತು. ಪಡಿತರದಾರರ ಹಿತದೃಷ್ಟಿಯಿದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಫಲಾನುಭವಿಗಳು ಅನ್ನಸೇವೆ ಯಾಪ್ ಮೂಲಕ ಮೊಬೈಲ್ ನಲ್ಲೇ ಇಕೆವೈಸಿ ಪೂರ್ಣಗೊಳಿಸಬಹುದು. ಇಲ್ಲವೆ ತಮ್ಮ ಹತ್ತಿರದ ನ್ಯಾಯಬೆಲೆ (ಪಡಿತರ) ಅಂಗಡಿಗೆ ತೆರಳ ಈ ಪ್ರಕ್ರಿಯೆ ಪೂರ್ಣ ಮಾಡಿಸಿಕೊಳ್ಳಲು ಅವಕಾಶವಿದೆ. ಅಂತಿಮ ಗಡುವಿನೊಳಗೆ ಇಕೆವೈಸಿ ಮುಗಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಮನವಿ ಮಾಡಿದೆ.
ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಆಹಾರ ಇಲಾಖೆ ಅನ್ನಸೇವೆ ಯಾಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರದ ನಿಯಮದ ಪ್ರಕಾರ ಐದು ವರ್ಷಕ್ಕೊಮ್ಮೆ ಇಕೆವೈಸಿ ಕಡ್ಡಾಯವಾಗಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ (ಫೇಸ್ ಅಥೆಂಟಿಕೇಶನ್ ) ಸೌಲಭ್ಯವೂ ಲಭ್ಯವಿದೆ. ಉದ್ಯೋಗಕ್ಕಾಗಿ ನಗರಿಗಳಿಗೆ ವಲಸೆ ಹೋದವರು ಇಕೆವೈಸಿ ಗಾಗಿ ಊಬಿರೆಗ ಬರಬೇಕಾದ ತೊಂದರೆಯನ್ನು ತಪ್ಪಿಸಲಿದೆ
Ration card ekyc status ಇಕೆವೈಸಿ ಮಾಡಿಸಲು ಯಾವ ಯಾವ ದಾಖಲೆ ಬೇಕು ?
ಇಕೆವೈಸಿ ಮಾಡಿಸಲು ಮೂಲ ರೇಶನ್ ಕಾರ್ಡ್ ಇರಬೇಕು. ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗಳು. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಓಟಿಪಿಗಾಗಿ ಬೇಕಾಗುತ್ತದೆ.

Ration card ekyc status ಇಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಇಕೆವೈಸಿ ಮಾಡಿಸಿದ ನಂತರ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬ ಸ್ಟೇಟಸ್ ಚೆಕ್ ಮಾಡಲು ಆಹಾರ ಇ ಸೇವೆಗಳ ಪೋರ್ಟಲ್
https://ahara.karnataka.gov.in/Home/Home
ಗೆ ಭೇಟಿ ನೀಡಬೇಕು. ಅಲ್ಲಿ ಇ ಕೇಶನ್ ಕಾರ್ಡ್ ವಿಭಾಗದ ಅಡಿಯಲ್ಲಿರುವ ಪಡಿತರ ಚೀಟಿ ತೋರಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ವಿಭಾಗ (ಬೆಂಗಳೂರು, ಮೈಸೂರು ಅಥವಾ ಕಲಬುರಗಿ) ಆಯ್ಕೆ ಮಾಡಿ. ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಓಟಿಪಿ ಮೂಲಕ ಸಲ್ಲಿಸಿ.. ಪರದೆಯ ಮೇಲೆ ಕುಟುಂಬ ಸದಸ್ಯರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಪ್ರತಿಯೊಬ್ಬರ ಹೆಸರಿನ ಮುಂದೆ ಇಕೆವೈಸಿ ಸ್ಥಿತಿಯು ತೋರಿಸುತ್ತದೆ.
Ration card ekyc status ಮೊಬೈಲ್ ನಲ್ಲೇ ಇಕೆವೈಸಿ ಮಾಡುವುದು ಹೇಗೆ ?
ಯಾರು ಯಾರು ಇನ್ನೂವರೆಗೆ ಇಕೆವೈಸಿ ಮಾಡಿಸಿಲ್ಲವೋ ಅವರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಕೆಲಸ ಮಾಡಬೇಕು.
ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸಲು ಈ
https://play.google.com/store/apps/details?id=in.gov.karnataka.ahara.annaseva&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ನಸೇವೆ ಆ್ಯಪ್ ತಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ಅನ್ನಸೇವೆ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಅನ್ನ ಸೇವೆ ಆ್ಯಪ್ ಡೌನ್ಲೋಡ್ ಆಗುತ್ತದೆ. ತದನಂತರ ಆ್ಯಪ್ ಓಪನ್ ಮಾಡಬೇಕು. ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು. ಇದಾದ ನಂತರ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ರುತ್ತದೆ. ಆ ಓಟಿಪಿ ಹಾಕಿದರೆ ಕುಟುಂಬ ಸದಸ್ಯರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಬಳಿಕ ಯಾರ ಇಕೆವೈಸಿ ಬಾಕಿ ಇದೆಯೋ ಅವರ ಹೆಸರಿ ಮೇಲೆ ಕ್ಲಿಕ್ ಮಾಡಿ ಸಹಾಯಕ ಯಾಪ್ ಗಳ ನೆರವಿನಿಂದ ಪ್ರಕ್ರಿಯೆ ಪೂರ್ಮಗೊಳ್ಳುವುದು.
ಅಥವಾ
https://ahara.karnataka.gov.in/fcs_verify_kser/main.aspx
ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪಟಿತರ ಚೀಟಿ ವಿವರ ಮೇಲೆ ಕ್ಲಿಕ್ ಮಾಡಬೇಕು. Without OTP ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಶನ್ ಕಾರ್ಡ್ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಎಷ್ಟು ಜನ ಸದಸ್ಯರ ಇಕೆವೈಸಿ ಆಗಿದೆ ಎಂಬ ಮಾಹಿತಿ ಕಾಣಿಸುತ್ತದೆ.





