Pmkisan fund released today : ರೈತ ಬಾಂಧವರೇ ನಿಮಗಿಲ್ಲದೆ ಗುಡ್ ನ್ಯೂಸ್, ಅದೇನಪಾ ಅಂದರೆ ಇಂದು ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ 2000 ರೂಪಾಯಿ ಜಮೆಯಾಗಲಿದೆ.
Pmkisan fund released today ಹೌದು, ತಮಗೆಲ್ಲ ಗೊತ್ತಿದ್ದ ಹಾಗೆ ಇಂದು ದೇಶಾದ್ಯಂತ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರ ಸಿದಿ ಸಂದೇಶ ನೀಡಲಿದೆ. ಬಹುನಿರೀಕ್ಷಿತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 24ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ 24ನೇ ಕಂತಿನ ಹಣವನ್ನು ರಿಲೀಸ್ ಮಾಡಲಿದ್ದಾರೆ.
Pmkisan fund released today ಪಿಎಂ ಕಿಸಾನ್ ಹಣ ಯಾವ ರೈತರಿಗೆ ಜಮೆಯಾಗಲಿದೆ
ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವು ಫಲಾನುಭವಿಗಳ ಹೊಸ ಪಟ್ಟಿಯಲ್ಲಿ ಯಾರ ಯಾರ ಹೆಸರಿದೆಯೋ ಅವರ ಖಾತೆಗೆ ಜಮೆಯಾಗಲಿದೆ. ಹೊಸದಾಗಿ ಬಿಡುಗಡೆಯಾದ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಾವುಗಳು ಕರ್ನಾಟಕದ ನಿವಾಸಿಗಳಾಗಿದ್ದರಿಂದ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ಯಾವ ತಾಲೂಕಿಗೆ ಸಂಬಂಧಿಸಿದ್ದೀರೋ ಆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಅಂದರೆ ನೀವು ಆಯ್ಕೆ ಮಾಡಿಕೊಂಡ ಊರುಗಳಲ್ಲಿ ಯಾವ ಯಾವ ರೈತರ ಖಾತೆಗೆ ಹಣ ಜಮೆಯಾಗುತ್ತದೆಯೋ ಅವರ ಹೆಸರು ಕಾಣಿಸುತ್ತದೆ.
Pmkisan fund released today ಇಕೆವೈಸಿ ಕಡ್ಡಾಯ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳು 24ನೇ ಕಂತಿನ ಪ್ರೋತ್ಸಾಹ ಧನ ಪಡೆಯಲು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬಯೋಮೆಟ್ರಿಕ್ ಫೇಸ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಪ್ರತಿ ವರ್ಷಿ ಇಕೆವೈಸಿ ಮಾಡಿಸಿಕೊಳ್ಳಬೇಕು.

Pmkisan fund released today ಇಕೆವೈಸಿ ಎಲ್ಲಿ ಮಾಡಿಸಬೇಕು.
ಇಕೆವೈಸಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇಕೆವೈಸಿ ಮಾಡಿಸಿಕೊಳ್ಳಬಹುದು. ಇಕೆವೈಸಿ ಮಾಡಿಸಲು ನಿಮ್ಮ ಆಧಾರ್ ಕಾರ್ಡ್ ಬೇಕಾಗುತ್ತದೆ.
Pmkisan fund released today ಇಕೆವೈಸಿ ಮಾಡಿಸಿದರೆ ಪಿಎಂ ಕಿಸಾನ್ ಹಣ ಜಮೆಯಾಗುವುದೇ
ಇಕೆವೈಸಿ ಮಾಡಿಸಿದ ಮಾತ್ರಕ್ಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ ಎಂದು ಹೇಳಕ್ಕಾಗುವುದಿಲ್ಲ. ರೈತರ ಜಮೀನನ ದಾಖಲೆಯಲ್ಲಿ (ಪಹಣಿಯಲ್ಲಿ) ಹೆಸರು, ಆಧಾರ್ ಕಾರ್ಡ್ ನಲ್ಲಿ ಹಾಗೂ ಬ್ಯಾಂಕ್ ಖಾತೆಯಲ್ಲಿ ರೈತರ ಹೆಸರು ಒಂದೇ ರೀತಿಯಾಗಿರಬೇಕು. ಸ್ವಲ್ಪ ವ್ಯತ್ಯಾಸವಿದ್ದರೂ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ. ಪಿಎಂ ಕಿಸಾನ್ ಯೋಜನೆ ಎಲ್ಲಾ ಅರ್ಹತೆ ಪಡೆದಿದ್ದರೂ ಹೆಸರಿನಲ್ಲಿ ವ್ಯತ್ಸಾಸವಿದ್ದರೆ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ

Pmkisan fund released today ಪಿಎಂ ಕಿಸಾನ್ ಹಣ ಯಾವಾಗ ಜಾರಿಗೆ ಬಂದಿದೆ
Pmkisan fund released today ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಯೋಜನೆ ಆರಂಭವಾದಾಗಿನಿಂದ ಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ಹಾಗಾಗಿ ಈ ಯೋಜನೆಯ ರೈತರ ವಿಶ್ವಾಸ ಗಳಿಸಿಕೊಂಡಿದೆ. 2019 ರ ಫೆಬ್ರವರಿ ತಿಂಗಳಲ್ಲಿ ಈ ಯೋಜನೆ ಆರಂಭವಾಗಿದೆ. 2019 ರ ಮೊದಲು ಯಾವ ಯಾವ ರೈತರ ಹೆಸರಿಗೆ ಜಮಿನಿದೆಯೋ ಅವರ ಖಾತೆಗೆ ಹಣ ಜಮೆಯಾಗುತ್ತದೆ. 2019 ರ ನಂತರ ರೈತರ ಹೆಸರಿಗೆ ಜಮೀನು ಇದ್ದರೆ ಅಂದರೆ ವರ್ಗಾವಣೆಯಾದರೆ ಅವರ ಖಾತೆಗೆ ಹಣ ಜಮೆಯಾಗುವುದಿಲ್ಲ. ಈ ಯೋಜನೆಯನ್ನು 2019ರ ನಂತರ ರೈತರ ಹೆಸರಿಗೆ ಜಮೀನು ವರ್ಗಾವಣೆಯಾದರೂ ಅವರ ಖಾತೆಗೆ ಜಮೆ ಮಾಡಬೇಕೆಂದು ದೇಶಾದ್ಯಂತ ರೈತರು ಒತ್ತಾಯ ಮಾಡುತ್ತಿದ್ದಾರೆ. ಏಕೆಂದರೆ 2019 ರ ನಂತರ ರೈತರ ಹೆಸರಿಗೆ ಜಮೀನು ವರ್ಗಾವಣೆಯಾದರೆ ಅವರು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣದಿಂದ ವಂಚಿತರಾಗುತ್ತಿದ್ದಾರೆ.






