Crop insurance application invited : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, 2026-27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ಕಡಲೆ, ಜೋಳ, ಗೋಧಿ, ಕುಸುಬೆ, ಭತ್ತ ಹಾಗೂ ನೆಲಗಡಲೆ (ಶೇಂಗಾ) ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗಾಗಿ ರೈತರು ತಮ್ಮ ಹತ್ತಿರದ ಬ್ಯಾಂಕುಗಳಲ್ಲಿ, ಗ್ರಾಮ ಒನ್ ಅಥವಾ ಸಿ.ಎಸ್.ಸಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದವರಿಗೆ ನಿರೀಕ್ಷಿತ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಮತ್ತು ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳು ಹಾಗೂ ಯಾವುದೇ ಹಂತದಲ್ಲಿ ಬೆಳೆ ನಾಶವಾಗಬಹುದು. ಆದ್ದರಿಂದ ರೈತ ಬಾಂಧವರು ಬಿತ್ತನೆ ಕಾರ್ಯ ಕೈಗೊಳ್ಳುವುದಷ್ಟೇ ಅಲ್ಲದೆ, ಬಿತ್ತಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರದಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ನೋಂದಾಯಿಸುವುದು ಸಹ ಪ್ರಮುಖವಾಗಿದೆ.
Crop insurance application invited ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗಾಗಿ ರೈತರ ಪಾವತಿಸಬೇಕಾದ ವಂತಿಕೆ ವಿವರ ಇಂತಿದೆ.
ಕಡಲೆ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 693 ರೂಪಾಯಿ ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗಾಗಿ ಡಿಸೆಂಬರ್ 15 ಕೊನೆಯ ದಿನವಾಗಿದೆ.
Crop insurance application invited ಕಡಲೆ (ನೀರಾವರಿ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 625.50 ರೂಪಾಯಿ ಪಾವತಿಸಬೇಕು. ಜೋಳ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 789 ರೂಪಾಯಿ ವಂತಿಕೆ ಪಾವತಿಸಬೇಕು. ಜೋಳ (ನೀರಾವರಿ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 666 ರೂಪಾಯಿ ಪಾವತಿಸಬೇಕು. ಬೆಳೆ ವಿಮೆ ನೋಂದಾಣಿಗೆ ನವೆಂಬರ್ 30 ಕೊನೆಯ ದಿನವಾಗಿದೆ.
ಭತ್ತ ( ನೀರಾವರಿ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 1629 ರುಪಾಯಿ ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ ನವೆಂಬರ್ 16 ಕೊನೆಯ ದಿನವಾಗಿದೆ. ಗೋಧಿ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 829.50 ರೂಪಾಯಿ ವಂತಿಕೆ ಪಾವತಿಸಬೇಕು. ಗೋಧಿ (ನೀರಾವರಿ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 550.50 ರೂಪಾಯಿ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.
ಇದನ್ನೂ ಓದಿ Village Land map ನಿಮ್ಮೂರಿನ ಎಲ್ಲಾ ಜಮೀನುಗಳ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024
Crop insurance application invited ಕುಸುಬೆ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 513 ರೂಪಾಯಿ ವಂತಿಕೆ ಪಾವತಿಸಬೇಕು. ಬೆಳೆ ವಿಮೆ ನೋಂದಣಿಗೆ ನವೆಂಬರ್ 30 ಕೊನೆಯ ದಿನವಾಗಿದೆ ಭತ್ತ (ನೀರಾವರಿ) ಬೇಸಿಗೆ ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 1629 ರೂಪಾಯಿ ವಂತಿಕೆ ಪಾವತಿಸಬೇಕು. ನೆಲಗಡಲೆ (ನೀರಾವರಿ) ಬೇಸಿಗೆ ಬೆಳೆಗೆ ರೈತರು ಪ್ರತಿ ಹೆಕ್ಟೇರಿಗೆ 1629 ರೂಪಾಯಿ ವಂತಿಕೆ ಪಾವತಿಸಬೇಕು ಬೆಳೆ ವಿಮೆ ನೋಂದಣಿಗೆ ಫೆಬ್ರವರಿ 26 ಕೊನೆಯ ದಿನವಾಗಿದೆ.
ಹೆCrop insurance application invited ಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ತಿಳಿಸಲಾಗಿದೆ.
Crop insurance application invited ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು
ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು ಎಂಬುದನ್ನ ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. Crop you can insure ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ ಚೆಕ್ ಮಾಡಬಹುದು.





