Bangalore GKVK Krishimela 2026 ಬೆಂಗಳೂರಿನ ಜಿಕೆವಿಕೆಯಲ್ಲಿ ನವೆಂಬರ್ 13 ರಂದು ಕೃಷಿ ಮೇಳ – ಇಲ್ಲಿದೆ ಮಾಹಿತಿ

Written by Admin

Published on:

Spread the love

Bangalore GKVK Krishimela 2026 : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನವೆಂಬರ್ 13 ರಿಂದು ಕೃಷಿ ಮೇಳ ಆಯೋಜಿಸಲಾಗಿದೆ. ಹೌದು, ಬಹು ನಿರೀಕ್ಷಿತ ಕೃಷಿ ಮೇಳವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುವ ಈ ಕೃಷಿ ಮೇಳದಲ್ಲಿ ಮೂರು ಹೊಸ ಬೆಳೆ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.

Bangalore GKVK Krishimela 2026  ಬರಪೀಡಿತ ಪ್ರದೇಶಗಳಿಗೆ ಸೂಕ್ತವಾದ ರಾಗಿ, ಮುಸುಕಿನ ಜೋಳ ಹಾಗೂ ಅಮರಂದನ್ (ರಾಜಗಿರಿ) ಸೇರಿದಂತೆ 3 ಹೊಸ ಬೆಳೆ ತಳಿಗಳನ್ನು ಲೋಕಾರ್ಪಣೆ ಮಾಡಲಾಗುವುದು.

Bangalore GKVK Krishimela 2026  ಕಡಿಮೆ ನೀರಿನಲ್ಲಿ ಹುಲುಸಾಗಿ ಬೆಳೆ ಬರುವ ರಾಗಿಯ ಜಿಪಿಯು 101, ಮುಸುಕಿನ ಜೋಳದ ಎಂಎಎಚ್ 20-45 ಹಾಗೂ ಬೀಜದ ದಂಟಿನ ಕೆಬಿಜೆಎ 18 ತಳಿಗಳನ್ನು ನೂತನವಾಗಿ ಸಂಶೋಧಿಸಲಾಗಿದ್ದು ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಲಾಗುವುದು ನೂತನ ತಳಿಗಳನ್ನು ಅಂದು ಸಾರ್ವಜನಿಕರು ವೀಕ್ಷಿಸಬಹುದು.

ರಾಗಿ ತಳಿಯು 110 ರಿಂದ 115 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹೆಕ್ಟೇರಿಗೆ 37 ರಿಂದ 40 ಕ್ವಿಂಟಾಲ್ ಇಳುವರಿ ಬರಲಿದ್ದು, 6.5 ಟನ್  ಮೇವು ಸಿಗುವುದು. ಈ ತಳಿಯ ವಿಶೇಶವಾಗಿದೆ. ಕಡಿಮೆ ನೀರಿನಲ್ಲಿ ಹುಲುಸಾಗಿ ಬೆಳೆ ಬರುವುದರಿಂದ ಬರಗಾಲಕ್ಕೆ ಈ ತಳಿ ಸೂಕ್ತವಾಗಿದೆ. ಬೆಂಕಿರೋಗ ನಿರೋಧಕತೆ ಹೊಂದಿದ್ದು, ಬಾಗುವಿಕೆಗೆ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿದೆ. ಈ ರಾಗಿಯಲ್ಲಿ ಕಬ್ಬಿಣದ ಅಂಸ ಅಧಿಕವಾಗಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಇದನ್ನೂ ಓದಿ Farm 9 and 11B document ನಿಮ್ಮ ಆಸ್ತಿಗಳ ಫಾರ್ಮ್ 9 ಮತ್ತು 11ಬಿ ಇಲ್ಲೇ ಡೌನ್ಲೋಡ್ ಮಾಡಿ

ಮುಸುಕಿನ ಜೋಳ  ಎಂಎಎಚ್ 20-45 ಹೈಬ್ರಿಡ್ ತಳಿಯನ್ನು ಸಂಶೋಧಿಸಲಾಗಿದ್ದು 125  ರಿಂದ 130 ದಿನದಲ್ಲಿ ಕಟಾವಿಗೆ ಬರಲಿದೆ.ಹೆಕ್ಟೇರಿಗೆ 110 ರಿಂದ 115 ಕ್ವಿಂಟಾಲ್ ಇಳುವರಿ ಬರಲಿದೆ. ಗಟ್ಟಾಯದ ಹಾಗೂ ಬಲಿಷ್ಠ ಕಾಂಡ, ಅಗಲ ಮತ್ತ ಮಂದ ಎಲೆಗಳನ್ನು ಹೊಂದಿದ್ದು, ಮೇವಿಗೂ ಸಹಕಾರಿಯಗಲಿದೆ. ಎಲೆ ಅಂಗಮಾರಿ ರೋಗಕ್ಕೆ ಸಹಿಷ್ಣುತೆ ಹಾಗೂ ಕೇದಿಗೆ ರೋಗಕ್ಕ ಮಧ್ಯಮ ಸಹಿಷ್ಣುತೆಯನ್ನು ಹೊಂದಿದೆ.

ಹೆಚ್ಚು ಪ್ರೋಟಿನ್ ಇರುವ ಕೆಬಿಜಿಎ 18 ಬೀಜಿದ ದಂಟನ್ನು ಸಂಶೋಧನೆ ಮಾಡಿದ್ದು, ಹೆಕ್ಟೇರಿಗೆ 22 ರಿಂದ 24 ಕ್ವಿಂಟಾಲ್ ಇಳುವರಿ ಸಿಗಲಿದೆ. ಸದೃಢ ಕಾಂಡ ಹೊಂದಿದ್ದು ಬಾಗವಿಕೆಗೆ ನಿರೋಧಕತೆಯನ್ನು ಹೊಂದಿದೆ. ಎಲೆ ತುಕ್ಕು ಮತ್ತು ಎಲೆ ಚುಕ್ಕೆ ರೋಗಕ್ಕೆ ಹಾಗೂ ಪ್ರಮು ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿದೆ.ಬೀಜ ಉದುರುವ ಪ್ರಮಾಣ ಕಡಿಮೆ ಇದೆ. ಹೆಚ್ಚು ಪ್ರೋಟೀನ್ ಅಂಶಗಳನ್ನು ಈ ಬೀಜದ ದಂಟು ಹೊಂದಿದೆ.

ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಜಿಕೆವಿಕೆಯಲ್ಲಿ ನಡೆಯಬೇಕಿದ್ದ ನಾಲ್ಕು ದಿನಗಲ ಕೃಷಿ ಮೇಳವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

Bangalore GKVK Krishimela 2026  ಪಿಎಂ ಕಿಸಾನ್ ಹಣ ಜಮೆಯಾಯಿತೇ ಚೆಕ್ ಮಾಡಿ

ಪಿಎಂ ಕಿಸಾನ್ ಫಲಾನುಭವಿಗಳು ತಮ್ಮ ಖಾತೆಗೆ 24ನೇ ಕಂತಿನ ಹಣ ಜಮೆಯಾಯಿತೋ ಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಅದು ಹೇಗೆ ಅಂದುಕೊಂಡಿದ್ದೀರಾ. ನಿಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಬಹುದು

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ನೀವ ನಿಮ್ಮ ರೆಜಿಸ್ಟ್ರೇಶನ್ ನಂಬರ್ ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಅಲ್ಲಿ ಕಾಣುವ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗಿಯೋ ಇಲ್ಲವೋ ಎಬ ಮಾಹಿತಿ ಕಾಣಿಸುತ್ತದೆ.

Leave a Comment