Ration card ekyc last date ರೇಷನ್ ಕಾರ್ಡ್ ಇಕೆವೈಸಿ ಮಾಡಲು ನವೆಂಬರ್ 10 ಕೊನೆಯ ದಿನ ಮೊಬೈಲ್ ನಲ್ಲೇ ಇಕೆವೈಸಿ ಹೀಗೆ ಮಾಡಿ

Written by Admin

Published on:

Spread the love

Ration card ekyc last date : ರಾಜ್ಯದಲ್ಲಿ ಪಡಿತರ ಚೀಟಿ ಇಕೆವೈಸಿ ಮಾಡಿಸಲು ನವೆಂಬರ್ 10 ಅಂತಿಮ ದಿನವಾಗಿದೆ. ಹಾಗಾಗಿ ಕೂಡಲೇ ಇನ್ನೂ ಯಾರು ಯಾರು ಇಕೆವೈಸಿ ಮಾಡಿಸಿಲ್ಲವೋ ಅವರು ನಿಮ್ಮ ಹತ್ತಿರದ ರೇಷನ್ ಕಾರ್ಡ್ ಅಂಗಡಿಗೆ ಅಥವಾ ನಿಮ್ಮ ಮೊಬೈಲ್ ನಲ್ಲೇ ಇಕೆವೈಸಿ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ರಾಜ್ಯದಲ್ಲಿ ಪಡಿತರ ಚೀಟಿ ಇಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದ್ದು, ಇನ್ನೂ ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಇನ್ನೂ 41 ಲಕ್ಷಕ್ಕೂ ಹೆಚ್ಚು ಪಡಿತರದಾರರು ಇಕೆವೈಸಿ ಮಾಡಿಲ್ಲ. ಪಡಿತರ ಕಡಿತ ತಪ್ಪಿಸಿಕೊಳ್ಳಳು ಸಾರ್ವಜನಿಕರು ತಮ್ಮ ಹತ್ತಿರದ ಪಡಿತರ ಅಂಗಡಿಗೆ ಹೋಗಿ ಸರಿಪಡಿಸಬಹುದು. ಅಥವಾ ಸಾರ್ವಜನಿಕರು ಅನ್ನಸೇವೆ ಮೊಬೈಲ್ ಯಾಪ್ ಮೂಲಕ ಅಥವಾ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ 10 ರೊಳಗಾಗಿ ಕಡ್ಡಾಯವಾಗಿ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Ration card ekyc last date ಮೊಬೈಲ್ ನಲ್ಲೇ ಇಕೆವೈಸಿ ಮಾಡುವುದು ಹೇಗೆ ?

ಯಾರು ಯಾರು ಇನ್ನೂವರೆಗೆ ಇಕೆವೈಸಿ ಮಾಡಿಸಿಲ್ಲವೋ ಅವರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ  ಕೆಲಸ ಮಾಡಬೇಕು.

ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸಲು ಈ

https://play.google.com/store/apps/details?id=in.gov.karnataka.ahara.annaseva&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ನಸೇವೆ ಆ್ಯಪ್ ತಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ಅನ್ನಸೇವೆ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಅನ್ನ ಸೇವೆ ಆ್ಯಪ್ ಡೌನ್ಲೋಡ್ ಆಗುತ್ತದೆ. ತದನಂತರ ಆ್ಯಪ್ ಓಪನ್ ಮಾಡಬೇಕು. ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು. ಇದಾದ ನಂತರ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ರುತ್ತದೆ. ಆ ಓಟಿಪಿ ಹಾಕಿದರೆ ಕುಟುಂಬ ಸದಸ್ಯರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಬಳಿಕ ಯಾರ ಇಕೆವೈಸಿ ಬಾಕಿ ಇದೆಯೋ ಅವರ ಹೆಸರಿ ಮೇಲೆ ಕ್ಲಿಕ್ ಮಾಡಿ ಸಹಾಯಕ ಯಾಪ್ ಗಳ ನೆರವಿನಿಂದ ಪ್ರಕ್ರಿಯೆ ಪೂರ್ಮಗೊಳ್ಳುವುದು.

ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಕೊಳ್ಳಬೇಕು.

Ration card ekyc last date ಮೊಬೈಲ್ ನಲ್ಲಿ ಯಾಪ್ ಇನಸ್ಟಾಲ್ ಮಾಡಿ

ಗೂಗಲ್ ಪ್ಲೇ ಸ್ಟೋರ್ ನಿಂದ Anna Seve app  ಡೌನ್ಲೌಡ್ ಮಾಡಿಕೊಳ್ಳಬೇಕು. ಆಧಾರ್ ಮುಖ ಗುರುತಿಸುವಿಕೆ ಯಾಪ್  ಸಹಾಯದಿಂದ ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಮುಖ ಚಹರೆ ನೀಡಿ ಇಕೆವೈಸಿ ಪೂರ್ಣಗೊಳಿಸಬಹುದು.

Ration card ekyc last date ರೇಷನ್ ಅಂಗಡಿಗಳಲ್ಲಿಯೂ ಇಕೆವೈಸಿ ಮಾಡಿ

ರೇಷನ್ ಕಾರ್ಡ್ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಅಲ್ಲಿನ AHARA ತಂತ್ರಾಂಶದಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ನೀಡುವ ಮೂಲಕ ಸುಲಭವಾಗಿ ಇಕೆವೈಸಿ ಮಾಡಿಸಿಕೊಳ್ಳಬಹುದು.

Ration card ekyc last date ಏಕೆ ಇಕೆವೈಸಿ ಮಾಡಿಸಬೇಕು

ಅನರ್ಹರು, ಮೃತಪಟ್ಟವರು ಮತ್ತು ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ಅರ್ಹ ಬಡ ಫಲಾನುಭವಿಗಳಿಗೆ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಮಾಡಲು ಇ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನವೆಂಬರ್ 10 ರೊಳಗೆ ಇಕೆವೈಸಿ ಮಾಡಿಸದಿದ್ದರೆ ಅಂತಹ ಸದಸ್ಯರ ಹೆಸರು ಪಡಿತರ ಚೀಟಿಯಿಂದ ರದ್ದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ Farm 9 and 11B document ನಿಮ್ಮ ಆಸ್ತಿಗಳ ಫಾರ್ಮ್ 9 ಮತ್ತು 11ಬಿ ಇಲ್ಲೇ ಡೌನ್ಲೋಡ್ ಮಾಡಿ

Leave a Comment